ಪೀಠಿಕೆ

7ನೇ ಸೆಪ್ಟಂಬರ್ 1973 ರಲ್ಲಿ 1956ರ ಕಂಪನಿ ಕಾಯಿದೆಯ ನಿಯಮದ ಪ್ರಕಾರ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಇಲಾಖೆಯು ಆಹಾರ ಸಾಮಗ್ರಿಗಳನ್ನು ಸಾರ್ವಜನಿಕರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲು ಸ್ಥಾಪಿಸಲಾಯಿತು.  ಪ್ರಸ್ತುತ ಈಗ ಇದು 28 ಜಿಲ್ಲಾ ಕಛೇರಿಗಳನ್ನು, 203 ಸಗಟು ಮಳಿಗೆಗಳನ್ನು ಮತ್ತು  177 ಚಿಲ್ಲರೆ ಅಂಗಡಿಗಳನ್ನು ಹೊಂದಿದ್ದು, ಇದರ ರಿಜಿಸ್ಟರ್ಡ್ ಕಛೇರಿಯು ಬೆಂಗಳೂರಿನಲ್ಲಿದೆ.

ಸಗಟು ನಾಮಿನಿದಾರರಾಗಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತವು ಭಾರತ ಆಹಾರ ನಿಗಮದ ಗೋದಾಮುಗಳಿಂದ ಶೇಕಡ 65 ಷ್ಟು ಆಹಾರ ದಾಸ್ತಾನಿನ ಎತ್ತುವಳಿ ವಹಿವಾಟು ನಡೆಸುತ್ತಾ, ಮಿಕ್ಕ ಭಾಗವನ್ನು ಟಿ.ಎ.ಪಿ.ಸಿ.ಎಂ.ಎಸ್.ಗೆ ಬಿಟ್ಟು ಕೊಡಲಾಗಿದೆ. ಸರ್ಕಾರದ ವಿಶೇಷ ಕಾರ್ಯಕ್ರಮಗಳಾದ ಕೂಲಿಗಾಗಿ ಕಾಳು, ಎಸ್.ಜಿ.ಆರ್.ವೈ ಮತ್ತು ಶಾಲಾ ಮಕ್ಕಳಿಗೆ ಮಧ್ಯಾಹ್ನ ಉಪಾಹಾರ ಯೋಜನೆ ಮುಂತಾದವುಗಳನ್ನು ಒದಗಿಸುವ ಪ್ರಧಾನ ಏಜೆಂಟ್‍ನಂತೆ ಕೆಲಸ ಮಾಡುತ್ತಿದೆ.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತವು ಮಾರ್ಕೆಟ್ಟಿನಲ್ಲಿ ಆಹಾರ ಪದಾರ್ಥಗಳ ಬೆಲೆಗಳನ್ನು ನಿಯಂತ್ರಿಸಿ, ಅದರ ಸಿದ್ಧತೆಯನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಬೆಳೆಗಾರರಿಂದ ನೇರವಾಗಿ ಭತ್ತ ಮತ್ತು ಇತರ ಧಾನ್ಯಗಳನ್ನು ಕೊಳ್ಳುತ್ತಾ, ಅವರಿಗೆ ಕನಿಷ್ಠ ಬೆಂಬಲ ಬೆಲೆ ಕೊಡುತ್ತಾ ಅವರ ಹಿತಾಸಕ್ತಿಯನ್ನು ಕಾಪಾಡುತ್ತಾ ಬಂದಿದೆ.  ಸಾಮಾನ್ಯ ಜನಗಳ ದಿನ ನಿತ್ಯದ ಅಗತ್ಯಗಳನ್ನು ಕೈಗೆಟುಕುವ ಬೆಲೆಯಲ್ಲಿ ಪೂರೈಸುವ ನಿಟ್ಟಿನಲ್ಲಿ, ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತವು ಎಣ್ಣೆ, ಕಾಳು, ಸಾಂಬಾರ ಪದಾರ್ಥಗಳು ಮತ್ತು ಇತರೆ ವಸ್ತುಗಳನ್ನು ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟ ಮಾಡುತ್ತಾ ಬಂದಿದೆ.  ಈಗ ಅದು ತನ್ನ ಕ್ಷೇತ್ರವನ್ನು ವಿಸ್ತರಿಸುವ ಸಲುವಾಗಿ, ಪೆಟ್ರೋಲ್, ಡೀಸೆಲ್ ಮತ್ತು ಎಲ್.ಪಿ.ಜಿ  ಘಟಕಗಳನ್ನು ತೆರೆದು, ಇದರ ಸಲುವಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ, ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ
 
ಮುಖ್ಯ ಉದ್ದೇಶ

1) ಗೋಧಿ, ಸಕ್ಕರೆ ಇತ್ಯಾದಿಗಳನ್ನು ಸಂಗ್ರಹಿಸಿ, ಅದನ್ನು ಗ್ರಾಹಕರಿಗೆ ಸಾರ್ವಜನಿಕ ವಿತರಣಾ ಪದ್ಧತಿಯ ಮೂಲಕ ವಿತರಣೆ ಮಾಡುವುದು.

2)ಇತರೆ ಅಗತ್ಯ ವಸ್ತುಗಳಾದ ಎಣ್ಣೆ, ಕಾಳು, ಸಾಂಬಾರ ಪದಾರ್ಥಗಳು, ಸೀಮೆಎಣ್ಣೆ, ಇತ್ಯಾದಿಗಳನ್ನು ಸಾಮಾನ್ಯ ಮನುಷ್ಯರಿಗೆ ಎಟುಕುವ ದರಗಳಲ್ಲಿ ಒದಗಿಸುವುದು.

3) ಸಗಟು ಮತ್ತು ಚಿಲ್ಲರೆ ಮಳಿಗೆಗಳನ್ನು ಎಲ್ಲಾ ಕಡೆಗಳಲ್ಲೂ ತೆರೆದು, ವಿತರಣಾ ವ್ಯವಸ್ಥೆಯನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದು.

4) ಬೆಲೆಗಳ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಮಧ್ಯ ಪ್ರವೇಶಿಸಿ ಬೆಳೆಗಾರರು ಬೆಳೆದ ಭತ್ತದ ಮತ್ತು ಇತರ ಕಾಳುಗಳನ್ನು ಕನಿಷ್ಠ ಬೆಂಬಲ ಬೆಲೆ ಕೊಟ್ಟು ಅವರನ್ನು ಮಧ್ಯವರ್ತಿಗಳಿಂದ ಕಾಪಾಡುವುದು.

5) ಎಲ್.ಪಿ.ಜಿ./ ಡೀಸೆಲ್ ಮತ್ತು ಪೆಟ್ರೋಲ್ ಬಂಕುಗಳನ್ನು ವಹಿಸಿಕೊಂಡು ಸಾರ್ವಜನಿಕರಿಗೆ ವಿತರಿಸುವುದು.

6) ಸರ್ಕಾರ ಹೊರಡಿಸುವ ಅದೇಶದನ್ವಯ ಕಾಲ ಸೂಚಿತ ಕಾರ್ಯಕ್ರಮಗಳನ್ನು / ಯೋಜನೆಗಳಾದ ಸಂಪೂರ್ಣ ಗ್ರಾಮೀಣ ರೋಜಗಾರ್ ಯೋಜನೆ, ಕೂಲಿಗಾಗಿ  ಕಾಳು, ಅಕ್ಷರ ದಾಸೋಹ ಯೋಜನೆ ಇವುಗಳನ್ನು ಜಾರಿಗೊಳಿಸುವುದು.

 

ಷೇರುಬಂಡವಾಳ

ಕಂಪನಿಯು 6 ಕೋಟಿ ಅಧಿಕೃತ ಷೇರು ಬಂಡವಾಳ ಹೊಂದಿದ್ದು 3.25 ಕೋಟಿ ಪಾವತಿ ಷೇರು ಬಂಡವಾಳ ಹೊಂದಿರುತ್ತದೆ.  ಪೂರ್ಣ ಷೇರು ಬಂಡವಾಳ ಕರ್ನಾಟಕ ಸರ್ಕಾರದ್ದಾಗಿರುತ್ತದೆ.  ಇದರ ವಿವರ ಇಂತಿದೆ :

1) ಕರ್ನಾಟಕ ಸರ್ಕಾರ 32493 ಷೇರುಗಳು
2) ಪ್ರಧಾನ ಕಾರ್ಯದರ್ಶಿಗಳು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ನಿರ್ದೇಶಕರು, ಕಆನಾಸನಿನಿ 01 ಷೇರು
3) ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ನಿರ್ದೇಶಕರು, ಕಆನಾಸನಿನಿ 01 ಷೇರು
4) ಅಧೀನ ಕಾರ್ಯದರ್ಶಿ, ಹಣಕಾಸು ಇಲಾಖೆ 02 ಷೇರುಗಳು
5) ವ್ಯವಸ್ಥಾಪಕ ನಿರ್ದೇಶಕರು, ಕಆನಾಸನಿನಿ 01 ಷೇರು
6) ಉಪ ಕಾರ್ಯದರ್ಶಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 01 ಷೇರು
7) ಪ್ರಧಾನ ವ್ಯವಸ್ಥಾಪಕರು, ಕಆನಾಸನಿನಿ 01 ಷೇರು

 


 

 ಮಂಡಳಿಯ ನಿರ್ದೇಶಕರು

ಕ್ರ.ಸಂ.

ಹೆಸರು

ಪದನಾಮ
ದೂರವಾಣಿ
1.

ಶ್ರೀ. ಆರ್. ನರೇಂದ್ರ, ಶಾಸಕರು,

ಅಧ್ಯಕ್ಷರು 080-22253659
080-22034835
2. ಶ್ರೀ. ಕಪಿಲ್ ಮೋಹನ್, ಐಎಎಸ್,
ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆ ಇಲಾಖೆ, ಎಂ.ಎಸ್. ಬಿಲ್ಡಿಂಗ್ ಬೆಂಗಳೂರು ಹಾಗೂ ನಿರ್ದೇಶಕರು, ಕಆನಾಸನಿನಿ, ಬೆಂಗಳೂರು. 080-22372426
3. ಶ್ರೀಮತಿ. ಎಮ್. ವಿ. ಸಾವಿತ್ರಿ, ಐಎಎಸ್
ಕಾರ್ಯದರ್ಶಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, 080-22259024
4.

ಡಾ. ಏಕರೂಪ್ ಕೌರ್, ಐಎಎಸ್

ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನಸೌಧ ಹಾಗೂ ನಿರ್ದೇಶಕರು, ಕಆನಾಸನಿನಿ, ಬೆಂಗಳೂರು. 080-22251772
5.

ಶ್ರೀ. ಟಿ. ಹೆಚ್. ಎಂ. ಕುಮಾರ್, ಐಎಎಸ್    

ಆಯುಕ್ತರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಆನಾಸನಿನಿ, ಬೆಂಗಳೂರು. 080-22262187
6.

ಶ್ರೀ. ಕೆ. ಹೇಮಾಜಿ ನಾಯಕ್, ಐ.ಎ,ಎಸ್    

ವ್ಯವಸ್ಥಾಪಕ ನಿರ್ದೇಶಕರು, ಕಆನಾಸನಿನಿ, ಬೆಂಗಳೂರು. 080-22260932
7.

ಶ್ರೀ. ಎಂ.ವಿ. ಚಂದ್ರಕಾಂತ್, ಕ.ಆ.ಸೇ,    

ಪ್ರಧಾನ ವ್ಯವಸ್ಥಾಪಕರು ಹಾಗೂ ನಿರ್ದೇಶಕರು, ಕಆನಾಸನಿನಿ., 080-22096673